ವಚನ - 1052     
 
ಸಜ್ಜನವಾಳುತ್ತಾಗಿ ಹಿಂದೆಂಬ ತೊಂಡುತನವೆ? ಮಿಂಡಾ ನಿನ್ನನೆಂತು ನಂಬುವೆ? ಆಹಾ, ತಾಯಿ ತಂದೆಯರು ನಿನ್ನ ನಡೆಸಿಹರೆಂಬೆನೆ? ಆಹಾ, ತಾಯಿ ತಂದೆಯರಮ್ಮ, ನಿಮ್ಮ ನುಡಿಸಿಹರೆಂಬೆನೆ? ಆಹಾ, ಎಲ್ಲರ ಬಿಟ್ಟು ಪೊದ್ದಿದವನೆ ನಂಬುಗೆ ಮಾಡಾ ಆ ಆ ಆ, ಕಪಿಲಸಿದ್ಧಮಲ್ಲಿಕಾರ್ಜುನಾ.