ಸುಖಮುಖವಾಗಿ ಸುಖಾಸೀನವಾಗಿ
ಆಧಾರ ಜ್ವಾಲೆಯನೆತ್ತಿ, ಕುಂಡಲಿಯ ಭುಜಗನ ಹೊಡೆದೆಬ್ಬಿಸಿ
ದಂಡನಾಳದ ತುದಿಯ ಮುಂದಣ ಮುಂಬಾಗಿಲ ಕಳೆದು ನೋಡಲು
ತ್ರಿಕೂಟಗಿರಿಯಾಗ್ರದಲ್ಲಿ ಮೇಲೆ ಸಿಂಹಾಸನವಿಕ್ಕಿ
ನಿಸ್ಸೀಮ ಕುಳ್ಳಿರ್ದನಯ್ಯಾ ನಮ್ಮ ನಿಜಗುರು ಸ್ವತಂತ್ರ
ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವನು.
Transliteration Sukhamukhavāgi sukhāsīnavāgi
ādhāra jvāleyanetti, kuṇḍaliya bhujagana hoḍedebbisi
daṇḍanāḷada tudiya mundaṇa mumbāgila kaḷedu nōḍalu
trikūṭagiriyāgradalli sinhāsanavikki
nis'sīma kuḷḷirdanayyā nam'ma nijaguru svatantra
kapilasid'dhamallikārjuna dēvaradēvanu.