ವಚನ - 1096     
 
ಸೊಲ್ಲಡಗಿ ಅಲ್ಲಲ್ಲಿ ಹದುಳಿಗನಾಗಿದ್ದೆನೆಲೆಯಯ್ಯ. ಎಲ್ಲಾ ಠಾವಿನಲ್ಲಿ ನೀನಿಪ್ಪನೆಂದು ತೊಳಲಿ ಬಳಲಿ ಬಂದೆ. ಸಲ್ಲಲಿತ ಗುರುವೆ, ಎನಗೆ ಸೊಲ್ಲನರುಹಿ ಬ್ರಹ್ಮವಿಪ್ಪ ನೆಲೆಯ ತೋರಿದ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.