ಹಿರಣ್ಯವೆಂದು ಮನ ವೇಧಿಸಿ
ಕೈಯಾಂತರೆ ಅಯ್ಯಾ ನಿಮ್ಮಾಣೆ,
ನಿಮ್ಮ ಪ್ರಸಾದಕಲ್ಲದೆ ಕೈಯಾನೆನಯ್ಯಾ.
ಅಯ್ಯಾ, ನಿಮ್ಮ ಪಾದೋದಕವಲ್ಲದೆ ಬೇರೆ ಕೊಳ್ಳೆನಯ್ಯಾ.
ನಿಮ್ಮಾಳು ಹೆರರ ಹಾರಿದರೆ ಕರೆದು ಬಾ ಎನ್ನಾ
ಕಪಿಲಸಿದ್ಧಮಲ್ಲಿನಾಥಾ ನಿನ್ನ.
Transliteration Hiraṇyavendu mana vēdhisi
kaiyāntare ayya nim'māṇe,
nim'ma prasādakallade kaiyānenayyā.
Ayyā, nim'ma pādōdakavallade bēre koḷḷenayyā.
Nim'māḷu herara hāridare karedu bā ennā
kapilasid'dhamallinātha ninna.