ವಚನ - 1150     
 
ಹೆಸರಿಡಬಾರದ ಭವಗೇಡಿ, ನಿನ್ನ ಕೂಡಿದವರು ನಿನ್ನಂತೆ ಹೆಸರುಗೆಡುವರಲ್ಲದೆ ಮರಳಿ ಹೆಸರುಂಟೆ? ಎಲೆ, ಭವಗೇಡಿ ಹರನೆ, ನಿನ್ನನರ್ಚಿಸಿದವರು ನಿನ್ನಂತೆ ಭವಗೆಡುವರಲ್ಲದೆ ಮರಳಿ ಭವವುಂಟೆ? ಅನಾದಿ ಸಂಸಿದ್ಧಯೋಗಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಾ ಇದ್ದೆಸೆಗೇಡಿ ನೀನು, ನಿನ್ನವರು ನಿನ್ನಂತೆ ಇದ್ದೆಸೆಗೆಟ್ಟರಯ್ಯಾ.