•  
  •  
  •  
  •  
Index   ವಚನ - 1159    Search  
 
ಹೊಲಮೇರೆಯಿಂ ಮೇರೆ ಹೊಲಬುದಪ್ಪಿದ ನಾದ ಕಳೆಗಳ ಮೀರಿರ್ದ ತುರ್ಯಂಗಳ, ಗುರುವಿನ ಕರುಣದ ಅನಿಮಿಷದ ಮನೆಯಲ್ಲಿ ಹೊಲಬುದಪ್ಪಿದ ಕಂಡೆ ಮಧ್ಯಮವನು. ಆನಂದಸ್ಧಾನದಲ್ಲಿ ಆಂದೋಳವಾಗಿಪ್ಪ ಮೂರರಕಳೆಗಳ ಭೇದಂಗಳ ಮೀರಲೀಯದ ಬ್ರಹ್ಮ, ತೋರಲೀಯದ ಸತ್ವ ನೀನಾದೆನೈ ಕಪಿಲಸಿದ್ಧಮಲ್ಲೇಶ್ವರಾ.
Transliteration Holamereyiṁ mēre holabudappida nāda kaḷegaḷa mīrirda turyaṅgaḷa, guruvina karuṇada animiṣada maneyalli holabudappida kaṇḍe madhyamavanu. Ānandasdhānadalli āndōḷavāgippa mūrarakaḷegaḷa bhēdaṅgaḷa tōralīyada satva nīnādenai kapilasid'dhamallēśvarā