ಸಂಚಿತಾದಿ ಕರ್ಮತ್ರಯಂಗಳು
ಜೀವನಿಗಲ್ಲದೆ ಶಿವಸ್ವರೂಪನಿಗೆಲ್ಲಿಹವೊ?
ಆಡುವ ಗೊಂಬೆಯನು ಆಡಿಸುವಾತಂಗಲ್ಲದೆ,
ಆಡುವ ಗೊಂಬೆಗೆಲ್ಲಿಹದೊ ಸ್ವತಂತ್ರತೆ?
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಇದರಿರವು ಸ್ವತಂತ್ರನಿಗಲ್ಲದೆ ಅಸ್ವತಂತ್ರನಿಗೆಲ್ಲಿಹದೊ ?
Transliteration San̄citādi karmatrayaṅgaḷu
jīvanigallade śivasvarūpanigellihavo?
Āḍuva gombeyanu āḍisuvātaṅgallade,
āḍuva gombegellihado svatantrate?
Kapilasid'dhamallikārjunayya,
idariravu svatantranigallade asvatantranigellihado?