ಅಂಗಕ್ಕೆ ಭೋಗವ ಕೊಟ್ಟವರ ನೋಡಿದೆನಲ್ಲದೆ,
ಲಿಂಗಕ್ಕೆ ಕೊಟ್ಟವರ ನೋಡಲಿಲ್ಲ.
ಲಿಂಗಕ್ಕೆ ಷೋಡಶೋಪಚಾರಂಗಳ
ಕೊಟ್ಟವರ ನೋಡಿದೆನಲ್ಲದೆ,
ಮನವ ಕೊಟ್ಟವರ ನೋಡಲಿಲ್ಲ.
ಮನವ ಕೊಟ್ಟವರ ನೋಡಿದೆನಲ್ಲದೆ,
ಮನ ಲಿಂಗವಾದವರ ನೋಡಲಿಲ್ಲ,
ಕಪಿಲಸಿದ್ಧಮಲ್ಲಯ್ಯಾ.
Transliteration Aṅgakke bhōgava koṭṭavara nōḍidenallade,
liṅgakke koṭṭavara nōḍalilla.
Liṅgakke ṣōḍaśōpacāraṅgaḷa
koṭṭavara nōḍidenallade,
manava koṭṭavara nōḍalilla.
Manava koṭṭavara nōḍidenallade,
mana liṅgavādavara nōḍalilla,
kapilasid'dhamallayyā.