ವಚನ - 1216     
 
ವೇಷದಲ್ಲಿ ಭಕ್ತನಾದಡೇನು, ವೇಷದಲ್ಲಿ ಮಹೇಶನಾದಡೇನು, ಗುಣವಿಲ್ಲದನ್ನಕರ ? ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು ? ರುಚಿಯಿಂದಲ್ಲದೆ ರೂಪದಿಂದವೆ ? ಕಪಿಲಸಿದ್ಧಮಲ್ಲಿಕಾರ್ಜುನಾ.