ಭಕ್ತನಾದ ಬಳಿಕ, ಅವರಿವರೆನ್ನದೆ
ಮಾಡುವುದಯ್ಯಾ ಪ್ರಸಂಗವ.
ಭಕ್ತನಾದ ಬಳಿಕ, ಅವರಿವರೆನ್ನದೆ
ಶರಣೆಂದು ಮನ್ನಿಸುವುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhaktanāda baḷika, avarivarennade
māḍuvudayya prasaṅgava.
Bhaktanāda baḷika, avarivarennade
śaraṇendu mannisuvudayya,
kapilasid'dhamallikārjunā.