•  
  •  
  •  
  •  
Index   ವಚನ - 1243    Search  
 
ಎನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ; ನಾನೇತರೊಳಗೇನು ಹೇಳಯ್ಯಾ! ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವು ಏತರದು ಹೇಳಯ್ಯಾ ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ; ಎನ್ನ ಸಟೆಯ ಭಕ್ತಿ ನಿಮ್ಮ ರೂಪು ಕಂಡಯ್ಯಾ, ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Enna kōpavembudu nim'ma kaṇṇu nōḍayya; nānātaroḷagēnu hēḷayyā! Nim'ma jñānada tējada munde ennarivu ētaradu hēḷayyā! Enna diṭada bhakti nim'ma rūpu kaṇḍayya; enna satiya bhakti nim'ma rūpu kaṇḍayya, enage bēre svatantrateyuṇṭe, hēḷā, kapilasid'dhamallikārjunā.