ವಚನ - 1245     
 
ಎನ್ನನಾಗಳೆ ಬಂದಿವಿಡಿದೆ ಗಡ ನೀನು. ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈ ಬೇರಾದವರು. ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು. ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಹಿಡಿದು ತಡೆಯಲಾನೇತರವನಲ್ಲ. ಕರುಣದಿಂದ ಬಾರಾ, ಎನ್ನ ದೇವರ ದೇವಾ.