ಬೆಳಗು ಬೆಳಗು ಹಳಚುವಲ್ಲಿ ಕತ್ತಲೆ ಉಳಿಯಬಲ್ಲುದೆ ಅಯ್ಯಾ ?
ಶರಣರು ಮಹಾನುಭಾವ ಗೋಷ್ಠಿಯ ಮಾಡುವಲ್ಲಿ,
ಸಂಗದೊಳಿರ್ದವರ ಅಜ್ಞಾನವಳಿದು ನಿಜವನೈದುವರಯ್ಯಾ.
ನಿಮ್ಮ ಮಹಾನುಭಾವದ ಸೋಂಕಿನ ಸೆರಗಿನೊಳಗಿರ್ದು
ನಾನು ಪರಮಸುಖಿಯಾಗಿ ಮಡಿವಾಳನ ಪಾದದಲ್ಲಿ
ಮನ ಮಗ್ನವಾದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Beḷagu beḷagu haḷacuvalli kattale uḷiyaballude ayyā?
Śaraṇaru mahānubhāva gōṣṭhiya māḍuvalli,
saṅgadoḷirdavara ajñānavaḷidu nijavanaiduvarayyā.
Nim'ma mahānubhāvada sōṅkina seraginoḷagirdu
nānu paramasukhiyāgi maḍivāḷana pādadalli
mana magnavādenu kāṇā, kapilasid'dhamallikārjunā.