ವಚನ - 1258     
 
ಬಡವ ನಿಧಾನವ ಕಂಡಂತೆ, ಹಾರುವ ಮಾಳವ ಕಂಡಂತೆ, ಶಿಶು ತನ್ನ ತಾಯ ಕಂಡಂತೆ, ವೀರ ತಾನು ಪರಸೇನೆಯ ಕಂಡಂತೆ, [ಆನು] ಚೆನ್ನಬಸವಣ್ಣನ ಪಾದವ ನೋಡಿ ಹರುಷಿತನಾದೆ, ಮಾಡಿ ಮಾಡಿಸಾ ಉಪದೇಶವ, ನೋಡಿ ನೋಡಿಸಾ ಮಹಿಮೆಯ. ಇದರದ್ಭುತವೇಕೆಂದಡೆ, ಕೊಡಿಸಾ ಎನ್ನ ಕೈಯಲ್ಲಿ ಇಷ್ಟಲಿಂಗವ, ಪರಮಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.