ಎಲ್ಲ ಪ್ರಮಥರು ಲಿಂಗವ ಧರಿಸುತ್ತಿರಲು
ನಾನೇನು ಒಲ್ಲೆನೆಂಬುವುದು ಕರ್ಮದ ಬಲೆಯೊ,
ಮಾಯದ ಬಲೆಯೊ?
ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ,
ನಾ ಧರಿಸಿಕೊಂಬುವೆ ಲಿಂಗವ.
ನೀ ಕರೆಸಿಕೊಂಬುವನಾಗು
ಮತ್ತೋರ್ವನ ನಿನ್ನ ಪೂಜೆಗೆ;
ನಾ ನಿನ್ನವನಲ್ಲೆಲೆ ದೇವಾ.
Transliteration Ella pramatharu liṅgava dharisuttiralu
nānēnu ollenembuvudu karmada baleyo,
māyada baleyo?
Ele kapilasid'dhamallināthayya,
nā dharisikombuve liṅgava.
Nī karesikombuvanāgu
mattōrvana ninna pūjege;
nā ninnavanalle dēvā.