ಎಂದೋ ಎನಗೆ ಶಿವಪದ ಎಂದೋ ಎಂದು ಚಿಂತಿಸುವಂಗೆ
ಮುಂದೆ ತೋರುತ್ತಿದೆ ಪರಮಪ್ರಸಾದದ ಬೀಡು.
ಆ ಬೀಡು ಕಂಡು, ಶಿವಗಣಂಗಳ ನೆರವ ಮಾಡಿಕೊಂಡು,
ಪರಮಗುರು ಚೆನ್ನಬಸವಣ್ಣನ ಶ್ರೀಪಾದಾರವಿಂದವನರಿದು,
ಅವರ ಕೃಪಾವಲೋಕನದಿಂದ ನಿಮ್ಮ ಶ್ರೀಪಾದವನರಿದೆ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Endō enage śivapada endō' endu cintisuvaṅge
munde tōruttide paramaprasādada bīḍu.
Ā bīḍu kaṇḍu, śivagaṇaṅgaḷa nerava māḍikoṇḍu,
paramaguru cennabasavaṇṇana śrīpādaravindavanaridu,
avara kr̥pāvalōkanadinda nim'ma śrīpādavanaride,
kapilasid'dhamallināthayya.