•  
  •  
  •  
  •  
Index   ವಚನ - 1302    Search  
 
ಎಲೆ ಅಯ್ಯಾ, ನಿಮ್ಮ ನಚ್ಚಿನ ಮಚ್ಚಿನ ಶರಣರ ಸಂಗದಲ್ಲಿರಿಸಿ, ಎನ್ನನಾಗು ಮಾಡಿದಿರಿ. ಆಹಾ! ನಿಮ್ಮ ಕರುಣವನೇನೆಂದುಪಮಿಸುವೆನು! ಎರಡು ಪುರವ ಮೆಟ್ಟಿ ಮೇಲು ಪುರವ ನೋಡುತಿರ್ದೆನು. ಮೇಲು ಪುರವ ಭೇದಿಸಲೊಡನೆ ನೀನು ನಾನಾದೆನಯ್ಯಾ. ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಪ್ರಭುದೇವರ ಕರುಣದಿಂದಲಾನು ಬದುಕಿದೆನು.
Transliteration Ele ayyā, nim'ma naccina maccina śaraṇara saṅgadallirisi, ennanāgu māḍidiri. Āhā! Nim'ma karuṇavanēnendupamisuvenu! Eraḍu purava meṭṭi mēlu purava nōḍutirdenu. Mēlu purava bhēdisaloḍane nīnu nānādenayyā. Kapilasid'dhamallinātha, nim'ma śaraṇa prabhudēvara karuṇadindalanu badukidenu.