•  
  •  
  •  
  •  
Index   ವಚನ - 1310    Search  
 
ತಾಯೆ, ಪರಮ ಸುಖಾಕಾರದ ಮೂರ್ತಿಯನಡಗಿಸಿ ನೀನೆಯಾದೆಯವ್ವಾ. ತಾಯೆ, ಮಹಾಜ್ಞಾನಕಲ್ಪಿತದಲ್ಲಿ ನೀನೆಯಡಗಿದೆಯವ್ವಾ. ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ, ಕಪಿಲಸಿದ್ಧಮಲ್ಲಿನಾಥಯ್ಯ, ನಮ್ಮ ತಾಯೆ ನೀಲಮ್ಮನಾದಳು.
Transliteration Tāye, parama sukhākārada mūrtiyanaḍagisi nīneyādeyavvā. Tāye, mahājñānakalpitadalli nīneyaḍagideyavvā. Tāye, nīlam'manemba sukhavāsamūrti, kapilasid'dhamallināthayya, nam'ma tāye nīlam'manādaḷu.