•  
  •  
  •  
  •  
Index   ವಚನ - 1314    Search  
 
ಅಯ್ಯಾ, ನಿಮ್ಮ ಮೂರ್ತಿಯ ನೋಡಿಹೆನೆಂದಡೆ ದೃಷ್ಟಿಯಾನವು. ನಿಮ್ಮ ತೇಜವನಾರು ನೋಡಲಮ್ಮರಯ್ಯಾ ನಿಮ್ಮ ತೇಜವನೊಬ್ಬರಿಗೆಯೂ ಉಪಮಿಸಬಾರದು. ನೀವು ಮುನಿದು ನೊಸಲ ಕಣ್ಣ ತೆಗೆದಡೆ, ಅದಕ್ಕೆ ಇದಿರಪ್ಪರಿನ್ನಾರು ಹೇಳಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ತೇಜವು ಮೂರುಲೋಕವ ನುಂಗಿದಡೆ ನೋಡಿ ಕಣ್ಣ ಮುಚ್ಚುತ್ತಿರ್ದೆನು.
Transliteration Ayyā, nim'ma mūrtiya nōḍ'̔ihenendaḍe dr̥ṣṭiyānavu. Nim'ma tējavanāru nōḍalam'marayyā nim'ma tējavanobbarigeyū upamisabāradu. Nīvu munidu nosala kaṇṇa tegedaḍe, adakke idirapparinnāru hēḷayyā, kapilasid'dhamallikārjunā, nim'ma tējavu mūrulōkava nuṅgidaḍe nōḍi kaṇṇa muccuttirdenu.