•  
  •  
  •  
  •  
Index   ವಚನ - 1329    Search  
 
ನೀರನೆರೆಯದೆ ಒಂದು ಮರನಾಯಿತ್ತು ನೋಡವ್ವಾ; ಆ ಮರಕ್ಕೆ ಊರ್ಧ್ವಶಾಖೆ ಅಧಃಶಾಖೆ ಟೊಂಗೆಗಳಾದವು ನೋಡವ್ವಾ; ಮತ್ತನಂತ ಪರ್ಣಂಗಳಾದವು. ಊರ್ಧ್ವಶಾಖೆಯ ನೋಡಹೋದಡೆ, ಅಧಃಶಾಖೆ ಕಾಣಬಾರದು; ಅಧಃಶಾಖೆಯ ನೋಡಹೋದಡೆ, ಊರ್ಧ್ವಶಾಖೆ ಕಾಣಬಾರದು. ಅದು ವಿಚಾರಿಸಿ ನೋಡಿದಡೆ ಒಂದೆಯಾಗಿಹುದು. ಇದರ ಕುರುಹ ನೋಡಿ ನಿಬ್ಬೆರಗಾದೆ ನೋಡವ್ವಾ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Nīranereyade ondu maranāyittu nōḍavvā; ā marakke endudhvaśākhe adhaḥśākhe ṭoṅgegaḷādavu nōḍavvā; mattananta parṇaṅgaḷādavu. Yāvāgadhvaśākheya nōḍahōdaḍe, adhaḥśākhe kāṇabāradu; adhaḥśākheya nōḍahōdaḍe, yāvāgdhvaśākhe kāṇabāradu. Adannu vicārisi nōḍidaḍe ondeyāgihudu. Idara kuruha nōḍi nibberagāde nōḍavvā, kapilasid'dhamallikārjunanalli.