ಉತ್ಪತ್ತಿ ಸ್ಥಿತಿ ಲಯವಿಲ್ಲದಭವ ನೀನು ಕಂಡಯ್ಯಾ.
ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ.
ನಿನ್ನಿಚ್ಛಾಮಾತ್ರದಲ್ಲಿ ನಾನಿಪ್ಪೆನು.
ಹಿರಿಯ ನೀನೇ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ,
ನಾನೇತರರೊಳಗಪ್ಪೆನು ಹೇಳಾ, ಪ್ರಭುವೆ!
Transliteration Utpatti sthiti layavilladabhava nīnu kaṇḍayya.
Enage bēre svatantravilla kēḷā.
Ninnicchāmātradalli nānippenu.
Hiriya nīnē dēvā, kapilasid'dhamallikārjunā,
nānētararoḷagappenu hēḷā, prabhuve!