•  
  •  
  •  
  •  
Index   ವಚನ - 1346    Search  
 
ಸಕಲಲಿಂಗವ ಹಿಡಿದು ಅಗಲದೆ ನಡೆ ಎಂದಿರಾಗಿ ನಡೆವುತ್ತಿರ್ದೆನು. ಲಿಂಗಪ್ರತಿಷ್ಠೆಯ ಮಾಡೆಂದು ಎನಗೆ ನಿರೂಪಿಸುತ್ತಿರ್ದ ಕಾರಣ, ಮಾಡುತ್ತಿರ್ದೆನಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ? ಹಿಂದೆ ನೀವು ಕೊಟ್ಟ ನಿರೂಪು ಹುಸಿಯಾದಡೆ ಇನ್ನು ಮುಂದೆ ಸ್ವಯವಪ್ಪಂತೆ ನಡೆಸಾ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Sakalaliṅgava hiḍidu agalade naḍe endirāgi naḍevuttirdenu. Liṅgapratiṣṭheya māḍendu enage nirūpisuttirda kāraṇa, māḍuttirdenallade enage bēre svatantravuṇṭe? Hinde nīnu koṭṭa nirūpu husiyādaḍe innu munde svayavappante naḍesā kapilasid'dhamallināthayya.