ವಚನ - 1364     
 
ಅಂಗದಂತೆ ಲಿಂಗ, ಲಿಂಗದಂತೆ ಅಂಗವಾದ ಬಳಿಕ ಅಂಗದಂತೆ ಲಿಂಗೈಕ್ಯ ಲಿಂಗದಂತೆ ಅಂಗೈಕ್ಯ. ಮನವೆ ಲಿಂಗ, ಲಿಂಗವೆ ಮನವಾದ ಬಳಿಕ, ಮಾತು ಮಾತುಗಳೆಲ್ಲ ಹೊಳ್ಳಾದ ಕಾರಣ ಮಾತೇ ಲಿಂಗೈಕ್ಯ; ಲಿಂಗೈಕ್ಯವೆ ಸ್ವರ! ಶಬ್ದಸಂದಣಿಗಿನ್ನು ತೆರಹುಂಟೆ? ಕಪಿಲಸಿದ್ಧಮಲ್ಲಿನಾಥಯ್ಯಾ, ಇನ್ನು ನಿಮ್ಮ ದೇವರೆಂದು ಅರಸಲುಂಟೇ ಇಲ್ಲವೋ ಎಂಬುದನು ತಿಳಿಹಿಕೊಡಾ ಅಯ್ಯಾ.