ಬಸವಣ್ಣನ ಮನೆಯ ಸ್ವಾನಂದ ನೋಡಿದಡೆ,
ಎನ್ನ ಮನ ಬೇಸರವಾಗದೆ
ಶಿವದಾಸನೆಂದು ಜೀವನ್ಮುಕ್ತನೆಂದು ಹೊಗಳುವೆನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ.
Transliteration Basavaṇṇana maneya svānanda nōḍidaḍe,
enna mana bēsaravāgade
śivadāsanendu jīvanmuktanendu hogaḷuvenayyā,
ele kapilasid'dhamallikārjuna prabhuve.