ವಚನ - 1377     
 
ಮನೆಯ ನೋಡಿ ಮನ ಹೊಗುವಂತಾಗಬೇಕು, ಜನ ನೋಡಿದಡೆ ಕೀರ್ತಿವಂತರಾಗಬೇಕು. ನಮ್ಮ ಸಂಗನ ಮನೆ ಹೊಕ್ಕಡೆ, ಮನವಳಿದು ಮನೋರಥ ಬಸವಣ್ಣನಂತಾಗಬೇಕು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.