ವಚನ - 1380     
 
ಕೇಳು ಕೇಳಾ, ಎಲೆ ಅಯ್ಯಾ, ಆದಿ ಅನಾದಿ ಇಲ್ಲದಂದು ಬಸವಣ್ಣನೆ ಭಕ್ತ; ನಾದ ಬಿಂದು ಕಳೆಗಳಿಲ್ಲದಂದು ನೀನೆ ಜಂಗಮ. ಶಿವ-ಶಕ್ತಿಗಳುದಯವಾಗದ ಮುನ್ನ ಬಸವಣ್ಣನೆ ಭಕ್ತ. ಸುರಾಳ-ನಿರಾಳವೆಂಬ ಶಬ್ದ ಹುಟ್ಟದ ಮುನ್ನ ನೀನೆ ಜಂಗಮ. ಈ ಉಭಯ ಭಾವದಲ್ಲಿ ಭೇದವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ? ಬಸವಣ್ಣನಾರೆಂಬುದ ನಿಮ್ಮಲ್ಲಿ ನೀವೆ ತಿಳಿದು ನೋಡಿ ಕೃಪೆಮಾಡಾ ಪ್ರಭುವೆ.