ವಚನ - 1388     
 
ನುಡಿದ ನಡೆ ಸಮನಿಸಿತ್ತಯ್ಯಾ ಸಂಗನ ಬಸವಣ್ಣಂಗೆ. ನುಡಿದ ನಡೆ ಸಮನಿಸಿತ್ತಯ್ಯಾ ಪ್ರಭುವಿಂಗೆ. ನುಡಿದ ನಡೆ ಸಮನಿಸದಯ್ಯಾ ನಿಮ್ಮಾತಂಗಲ್ಲದೆ ಆತಂಗೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.