ವಚನ - 1402     
 
ದೇಹವ ನಿರ್ದೇಹಿಗೊಪ್ಪಿಸಿದಲ್ಲಿ ದೇಹ ನಿರ್ದೇಹವಾಗಿತ್ತು. ಮನವ ಲಿಂಗಕ್ಕರ್ಪಿಸಿದಲ್ಲಿ ಮನ ಲಿಂಗವಾಗಿ ಮನ ಲೀಯವಾಯಿತ್ತು. ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತಯ್ಯಾ. ದೇಹ ಮನ ಭಾವವಳಿದಲ್ಲಿ ಕಾರಣಕಾಯ ಅಕಾಯವಾಯಿತ್ತು. ಎನ್ನ ದೇಹದ ಸುಖವ ಲಿಂಗ ಭೋಗಿಸುವುದಾಗಿ, ಶರಣಸತಿ ಲಿಂಗಪತಿ ಎಂಬ ಭಾವ ಅಳವಟ್ಟಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.