ವಚನ - 1404     
 
ಎಂದಿಪ್ಪೆನಯ್ಯಾ ಲಿಂಗಪೂಜೆಯ ಮಾಡುತ್ತ? ಎಂದಿಪ್ಪೆನಯ್ಯಾ ಜಂಗಮವನರ್ಚಿಸುತ್ತ? ಎಂದಿಪ್ಪೆನಯ್ಯಾ ಪ್ರಮಥಸಹ ಭೋಜನ ಪಂಙ್ತೆಯಲ್ಲಿ? ಎಂದಿಪ್ಪೆನಯ್ಯಾ, ನಮ್ಮ ಚೆನ್ನಬಸವಣ್ಣನ ಪಾದೋದಕ ಪ್ರಸಾದವ ಸೇವಿಸುತ್ತ ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.