ವಚನ - 1407     
 
ಮಾಡಬೇಕು ಮಾಡಬೇಕು ಮನವೊಲಿದು ಲಿಂಗಪೂಜೆಯ. ನೋಡಬೇಕು ನೋಡಬೇಕು ಮನವೊಲಿದು ಲಿಂಗ ಸಂಭ್ರಮವ. ಹಾಡಬೇಕು ಹಾಡಬೇಕು ಮನವೊಲಿದು ಲಿಂಗಸ್ತೋತ್ರವ. ಕೂಡಬೇಕು ಕೂಡಬೇಕು ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ಗುರು ಚೆನ್ನಬಸವಣ್ಣ ಕೊಟ್ಟ ಇಷ್ಟಲಿಂಗದಡಿಯಲ್ಲಿ.