ಲೋಕದಲ್ಲಿಹ ವಿಟರೆಲ್ಲ
ವಾರಂಗನೆಯ ನೋಡಿದರಲ್ಲದೆ,
ನಮ್ಮ ವಾರಾಂಗನನೊಬ್ಬರೂ ನೋಡಲಿಲ್ಲಯ್ಯಾ.
ಲೋಕದಲ್ಲಿಹ ಕುಶಲರೆಲ್ಲ
ಜಂಗಮದೊಂದಿಗೆ ನುಡಿದರಲ್ಲದೆ,
ಎಮ್ಮ ಲಿಂಗದೊಂದಿಗೊಬ್ಬರು
ನುಡಿದವರಿಲ್ಲ ಕಂಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ನಾನೊಬ್ಬನೆ ಪ್ರಮಥರ ಮುಂದೆ.
Transliteration Lōkadalliha viṭarella
vāraṅganeya nōḍidarallade,
nam'ma vārāṅgananobbarū nōḍalilla.
Lōkadalliha kuśalarella
jaṅgamadondige nuḍidarallade,
em'ma liṅgadondigobbaru
nuḍidavarilla kaṇḍayya,
kapilasid'dhamallikārjunā,
nānobbane pramathara munde.