•  
  •  
  •  
  •  
Index   ವಚನ - 1423    Search  
 
ಅಂಗ [ಲಿಂಗ] ಒಂದಾದ ಬಳಿಕ [ಅಂ]ಗೇಂದ್ರಿಯಂಗಳಾಚರಿಸಲಾಗದು. ಅಂಗೇಂದ್ರಿಯಂಗಳು ಹೋಗಿ ಲಿಂಗೇಂದ್ರಿಯಂಗಳಾಗಿ ಆಚರಿಸುವುದು. `ಘೃತೋ ಭೂತ್ವಾ ಕಥಂ ಕ್ಷೀರಂ ಭವತ್ಯೇವಂ ವರಾನನೇ' ಎಂಬಾಗಮೋಕ್ತಿ ಪುಸಿಯಾಯಿತ್ತೆ? ಆಗಿ ಆಚರಿಸಿದಡೆ ಭವ ಹಿಂಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aṅga [liṅga] ondāda baḷika [aṁ]gēndriyaṅgaḷācarisalāgadu. Aṅgēndriyaṅgaḷu hōgi liṅgēndriyagaḷāgi ācarisuvudu. `Ghr̥tō bhūtvā kathaṁ kṣīraṁ bhavatyēvaṁ varānanē' embāgamōkti pusiyāytu? Āgi ācarisidaḍe bhava hiṅgadu nōḍā, kapilasid'dhamallikārjunā.