ಸಿದ್ಧಾಂತಿಯ ಜ್ಞಾನ ಸಾಧನೆಯಲ್ಲಿ ಹೋಯಿತ್ತು.
ವೇದಾಂತಿಯ ಜ್ಞಾನ ವಾದದಲ್ಲಿ ಹೋಯಿತ್ತು.
ಕ್ರಿಯಾವಂತನ ಜ್ಞಾನ ನುಡಿಯಲ್ಲಿ ಹೋಯಿತ್ತು.
ವ್ಯವಹಾರಿಕನ ಜ್ಞಾನ ದ್ರವ್ಯಾರ್ಜನೆಯಲ್ಲಿ ಹೋಯಿತ್ತು.
ಇವೆಲ್ಲ ಭವಕ್ಕೆ ಕಾರಣವಲ್ಲದೆ,
ಭವರಹಿತ ಜ್ಞಾನವು ಸಾಧ್ಯವಾಗುವುದದು
ದುರ್ಲಭವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sid'dhāntiya jñāna sādhaneyalli hōyittu.
Vēdāntiya jñānavādadalli hōyittu.
Kriyāvantana jñāna nuḍiyalli hōyittu.
Vyavahārikana jñāna dravyārjaneyalli hōyittu.
Ellā bhāvakke kāraṇavallade,
bhavarahita jñānavu sādhyavāguvudadu
durlabhavayya,
kapilasid'dhamallikārjunā.