ವಚನ - 1443     
 
ಜಂಗಮವ ಪೂಜಿಸುವಡೆ ಜಗದ್ಭರಿತ ನೋಡಾ. ನೋಡುವಡೆ ಏಕದೇಹಿ ನೋಡಯ್ಯಾ. ಲಿಂಗವ ಪೂಜಿಸುವಡೆ, `ಲಿಂಗಮಧ್ಯೇ ಜಗತ್ಸರ್ವಂ' ಎಂದು ಶ್ರುತಿ ಸಾರುತ್ತಿದೆ. ಗುರುವ ಪೂಜಿಸುವಡೆ, `ಗೀರಿತಿ ಜ್ಞಾನಂ ಗುರುಃ' ಎಂದು [ಶಬ್ದೋತ್ಪತ್ತಿ] ಉಂಟು. ಇವೆಲ್ಲ ನನಗೆ ಅಸಾಧ್ಯ ನೋಡಾ. ನಿನ್ನ ಪೂಜಿಸೆ ನಿನ್ನ ಕೈಕೊಂಬ ಪರಿಯ ಹೇಳಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.