ವಚನ - 1468     
 
ವಿಧಿ ನಿಷೇದಂಗಳಿಲ್ಲದನಾದಿ ನೀ ನೋಡಯ್ಯಾ. ಜಪ-ತಪವಿಲ್ಲದ ಮಹಾಮುನಿ ನೋಡಯ್ಯಾ. ಇಹ-ಪರ ಸುಖ-ದುಃಖಾತೀತನಯ್ಯಾ ನಿಮ್ಮ ಶರಣ, ಕಪಿಲಸಿದ್ಧಮಲ್ಲಿಕಾರ್ಜುನಾ.