ವಚನ - 1491     
 
ಜಡ, ಅಸತ್ಯ, ಸುಖ-ದುಃಖ, ಅನಿತ್ಯ, ಖಂಡಿತ ಎಂಬೈದು ಲಕ್ಷಣ ಮಾಯಾತ್ಮಕವಯ್ಯಾ. ಮೂಢಮಯ ಕಲ್ಲು ಮೊದಲಾದವೆ ಜಡದೃಶ್ಯ ನೋಡಯ್ಯಾ. ಮೃಗದಲ್ಲಿಲ್ಲದ ಶಶವಿಷಾಣಾಧಿಕವೆ ಅಸತ್ಯವಯ್ಯಾ. ರಜೋಗುಣಿಯ [ಸಹ್ಯಾ]ಸಹ್ಯ ವೃತ್ತಿಯೆ [ಸುಖ] ದುಃಖ ಕಂಡಯ್ಯಾ. ತೋರಿ ಕೆಡುವ ದೇಹಾಧಿಕರೆ ಅನಿತ್ಯ ಕಂಡಯ್ಯಾ. ಕಾಲಪರಿಚ್ಛೇದಾಧಿಕವೆ ಖಂಡಿತ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.