•  
  •  
  •  
  •  
Index   ವಚನ - 1503    Search  
 
ಕುಲಾಕುಲ ಅನುಭವಕ್ಕಲ್ಲದೆ ಸಮರಸಕ್ಕೇನೋ ಅಯ್ಯಾ? ವಾದವಿವಾದವೆಂಬುದು ಶಾಸ್ತ್ರದಲ್ಲಲ್ಲದೆ ಸಭೆಯಲ್ಲೇನೋ ಅಯ್ಯಾ? ಹಾಸ್ಯಾಹಾಸ್ಯ ನುಡಿಗಡಣದಲ್ಲಲ್ಲದೆ ನುಡಿಯುವ ಕಾಯದಲ್ಲೇನೋ ಅಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kulakula anubhavakkallade samarasakkēnō ayyā? Vādavivādavembudu śāstradallallade sabheyallēnō ayyā? Hāsyahāsya nuḍigaḍaṇadallallade nuḍiyuva kāyadallēnō ayyā? Kapilasid'dhamallikārjunā.