Index   ವಚನ - 1505    Search  
 
ಅಂಗ ಲಿಂಗ ಒಂದೆಂದ ಬಳಿಕ ಅಂಗ ಕೆಟ್ಟು ಲಿಂಗ ಉಳಿಯಿತ್ತು, ನೋಡಾ. ಅಂಗ ನಿರ್ವಯಲಾದಲ್ಲಿ ಲಿಂಗ ಭವಿಯಾದುದು ನೋಡಾ. ಅಂಗ ಲಿಂಗ ನಿರ್ವಯಲಲ್ಲಡಗಿಸಬಲ್ಲಡೆ, ಭಕ್ತನೆಂಬೆ ಮಹೇಶನೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನನವನೆ ಎಂಬೆ ನೋಡಾ, ಅಮುಗಿದೇವಾ.