•  
  •  
  •  
  •  
Index   ವಚನ - 1511    Search  
 
ಬಾಲಕನ ಹಣ್ಣು ಬಾಲಕಂಗಲ್ಲದೆ ಪಿತಂಗೇನೋ ಅಯ್ಯಾ? ಭಕ್ತನ ಸೊಮ್ಮು ಭಕ್ತಂಗಲ್ಲದೆ, ನಿರವಯ ನಿರಾಳ ಗುರು-ಲಿಂಗ-ಜಂಗಮಕ್ಕೇನೋ ಅಯ್ಯಾ? ತನು-ಮನ-ಧನದೊಳಗಾ[ದೆನೆಂ]ಬವನ ಬೆನ್ನ ಬಾರನೆತ್ತದೆ ಬಿಡುವನೆ, ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Bālakana haṇṇu bālakaṅgallade pitaṅgenō ayyā? Bhaktana som'mu bhaktaṅgallade, niravaya nirāḷa guru-liṅga-jaṅgamakkēnō ayyā? Tanu-mana-dhanadoḷagā[deneṁ]bavana benna bāranettade biḍuvane, kapilasid'dhamallikārjunā?