•  
  •  
  •  
  •  
Index   ವಚನ - 1520    Search  
 
ಸಂತೆಯೊಳಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಅಂತಕಾಂತಕ ಶ್ರೀಗುರುಮೂರ್ತಿ ತನ್ನರುಹಿನ ರೂಪವಿಂತೆಂದು ತೋರಿದ ಕಲ್ಲೇ ನಿಜಲಿಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Santeyoḷidda kallugaḷella liṅgavēno ayyā? Parvata vāraṇāsi badarikā kṣētragaḷallidda kallugaḷellā liṅgavēno ayyā? Antakāntaka śrīgurumūrti tannaruhina rūpavintendu tōrida kallē nijaliṅga nōḍā, kapilasid'dhamallikārjunā.
Music Courtesy: