ಮುನ್ನ ಮಾಡಿದ ದೇಹ ನಿರ್ವಯಲಾದಡೆ,
ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ?
ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು.
ಇವೆಲ್ಲ ಭವಸಂಕಲ್ಪವಿಕಲ್ಪವು.
ಅಂಗ ಲಿಂಗವೆಂಬುದು ಪಳಮಾತು.
`ಲಿಂಗಮಧ್ಯೇ ಜಗತ್ಸರ್ವಂ'
ಎಂಬುದು ಅಖಂಡಲಿಂಗ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Munna māḍida dēha nirvayalādaḍe,
dharisuvudēkō kallu liṅgava, ele ayyā?
Aṅgaguṇa liṅgakkāytu; liṅgaguṇa aṅgakkāytu.
Ivella bhavasaṅkalpavikalpavu.
Aṅga liṅgavembudu paḷamātu.
`Liṅgamadhyē jagatsarvaṁ'
embudu akhaṇḍaliṅga nōḍā,
kapilasid'dhamallikārjunā.