ವಚನ - 1555     
 
ಆದ್ಯರ ನುಡಿ ಆದ್ಯರಿಗಲ್ಲದೆ, ವೇದ್ಯರಿಗೆ ಸಾಧ್ಯವಾಗದೆಂಬ ನುಡಿ ಹೊಲ್ಲ. ಈತ ಆದ್ಯನೊ, ಮಧ್ಯದಲ್ಲಿಂದ ಬಂದಾತನೊ ಅಯ್ಯಾ? ತಿಳಿದು ನೋಡುವಡೆ ಸ್ವಯಂವೇದ್ಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.