•  
  •  
  •  
  •  
Index   ವಚನ - 1601    Search  
 
ಯೋಗಿನಾಥನ ಒಲುಮೆ ಯೋಗಿಯಾದವಂಗಲ್ಲದೆ, ಭೋಗಿಯಾದಾತಂಗೆಲ್ಲಿಹುದಯ್ಯಾ? ಪಂಚಮಸ್ವರದಾಯತ ಕೋಗಿಲೆಗಲ್ಲದೆ ಕಾಗೆಗೆಲ್ಲಿಹುದೊ? ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ.
Transliteration Yōgināthana olume yōgiyādavaṅgallade, bhōgiyādātaṅgellihudayyā? Pan̄camasvaradāyata kōgilegallade kāgegellihudo? Kapilasid'dhamallikārjuna yōginātha.