ವಚನ - 1614     
 
ಇಂದ್ರಿಯನಿಗ್ರಹ[ವ] ಮಾಡಿದಡೇನಯ್ಯಾ, ಚಂದ್ರಧಾರಿಯಾಗಬಲ್ಲನೆ? ಇಂದ್ರಿಯ ಕಟ್ಟಿದ ಕುದುರೆ ಇಂದ್ರನ ಉಚ್ಚೈಶ್ರವವಹುದೆ ಅಯ್ಯಾ? ಇಂದ್ರಿಯಂಗಳೆಂಬುದು ಮಾಯಾಜಾಲವು ತಾನೆ. `ನ ಸತೀ' ಎಂಬ ಶ್ರುತಿಯದು ಪ್ರಸಿದ್ಧ. ಲಿಂಗವೆಂಬುದ ತಿಳಿಯಬಲ್ಲಾತನೆ ಜಗದ್ವಂದ್ಯ ಜಂಗಮವೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.