ತಿಳಿದು ತಿಳಿದು ವಿಷಯಕ್ಕೆ ಮೈಗೊಟ್ಟಡೆ
ಅನುಭಾವಿಯೆ, ಅಯ್ಯಾ?
ಅಳಿದು ಅಳಿದು ಆನಂದಕ್ಕೆ
ಮೈಗೊಟ್ಟಡೆ ಅಜ್ಞಾನಿಯೆ, ಅಯ್ಯಾ?
ತಿಳಿದ ಬಳಿಕ ವಿಷಯಗಳಳಿಯಬೇಕು.
ಅಳಿದ ಬಳಿಕ, ಎಳೆಯ ಚಂದ್ರಧರ
ಕಪಿಲಸಿದ್ಧಮಲ್ಲಿಕಾರ್ಜುನನಾಗಲೇಬೇಕು.
Transliteration Tiḷidu tiḷidu viṣayakke maigoṭṭaḍe
anubhāviye, ayyā?
Aḷidu aḷidu ānandakke
maigoṭṭaḍe ajñāniye, ayyā?
Tiḷida baḷika viṣayagaḷirabēku.
Aḷida baḷika, eḷeya candradhara
kapilasid'dhamallikārjunanāgabēku.