•  
  •  
  •  
  •  
Index   ವಚನ - 1679    Search  
 
ಮಂತ್ರವ ಜಪಿಸಿ ಫಲವೇನಯ್ಯಾ ಮಂತ್ರಮೂರ್ತಿ ಕಾಣದನ್ನಕ್ಕ? ಯಂತ್ರವ ಧರಿಸಿ ಫಲವೇನಯ್ಯಾ ಅಂತರ ರೋಗ ಪರಿಹಾರವಾಗದನ್ನಕ್ಕ? ತಂತ್ರವನೋದಿ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ? ಶರಣನಾಗಿ ಫಲವೇನಯ್ಯಾ, ಲಿಂಗ ಜಂಗಮವ ಪೂಜಿಸಿ ಮೋಕ್ಷವಡೆಯದನ್ನಕ್ಕ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mantrava japisi phalavēnayyā mantramūrti kāṇadannakka? Yantrava dharisi phalavēnayyā antara rōga parihāravāgadannakka? Tantravanōdi phalavēnayyā, adarantara maigūḍadannakka? Śaraṇanāgi phalavēnayyā, liṅga jaṅgamava pūjisi mōkṣavaḍeyadannakka? Ele kapilasid'dhamallikārjunā.