ವಚನ - 1691     
 
ಶರಣನ ಸಂಭ್ರಮ ಲಿಂಗಪೂಜೆ, ಜಂಗಮದಾಸೋಹ ನೋಡಯ್ಯಾ. ಶರಣನ ಸಂಭ್ರಮ ಅನುಭವ ಓದಿ ಭವ ಗೆಲಿಯುವುದು. ಅದೆ ಸಂಭ್ರಮಕಾರ್ಯ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.