ವ್ರತಗೇಡಿ ವ್ರತಗೇಡಿ ಎಂಬವ, ತಾನೆ ವ್ರತಗೇಡಿ.
ವ್ರತ ಕೆಡಲಿಕೇನು ಹಾಲಂಬಿಲವೆ?
ವ್ರತ ಕೆಟ್ಟ ಬಳಿಕ ಘಟ ಉಳಿಯಬಲ್ಲುದೆ?
ಕಾಯದೊಳಗೆ ಜೀವವುಳ್ಳನ್ನಕ್ಕ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರಾ.
Art
Manuscript
Music Courtesy:
Video
TransliterationVratagēḍi vratagēḍi embava, tāne vratagēḍi.
Vrata keḍalikēnu hālambilave?
Vrata keṭṭa baḷika ghaṭa uḷiyaballude?
Kāyadoḷage jīvavuḷḷannakka
adē prāṇaliṅgavu kāṇā guhēśvarā.
Hindi Translationव्रतभंगी व्रतभंगी कहनेवाला खुद व्रतभंगी है !
व्रतभंगी कहने को क्या वह जमाया दूध है ?
व्रतभंग होने से क्या घट बच सकता है ?
शरीर में जीव रहने तक
वहीं प्राण लिंग है देखो गुहेश्वरा।
Translated by: Eswara Sharma M and Govindarao B N
English Translation
Tamil Translationநோன்பிலி நோன்பிலி என்போனே நோன்பிலியாவான்!
நோன்பு கெடுவதற்கு பாலில் புளி கலந்துள்ளதோ?
நோன்பு கெட்டபிறகு பானை எஞ்சி இருக்குமோ?
உடலினுள் உயிர் இருக்கும்வரை
அதே பிராணலிங்கம்! காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುವ್ರತ = ಲಿಂಗಸಂಬಂಧವಾದ ಅರ್ಚನೆ, ಅರ್ಪಣಾನುಗತ ಆಚರಣೆ; ವ್ರತಗೇಡಿ = ಈ ಸಂಬಂಧಾಚರಣೆಗೆ ತಪ್ಪಿದ ಭಕ್ತ; ಹಾಲಂಬಿಲ = ಅದಾಗ ಹುಳಿಯಿಕ್ಕಿದ ಹಾಲು, ಅದು ಕೆಟ್ಟು ಹೋಗುತ್ತದೆ; Written by: Sri Siddeswara Swamiji, Vijayapura