ಅನುಭವವೆಂಬುದದು ಅನುಭಾವಿಕಗಲ್ಲದೆ
ಹೊತ್ತಗೆಯಲ್ಲಿಲ್ಲ ನೋಡಾ ಮಾನವಾ.
ರತ್ನಂಗಳು ಸಮುದ್ರದಲ್ಲಲ್ಲದೆ
ಕೀಳು ಕುಲ್ಯಾದಿಗಳಲ್ಲಿಲ್ಲ ನೋಡಾ, ಮಾನವಾ.
ನವಮಂತ್ರಂಗಳ ಮರ್ಮವದು ಗುರುಮುಖದಲ್ಲಲ್ಲದೆ,
ಬರಿಯ ಪುರಾಣಂಗಳಲ್ಲಿಲ್ಲ ನೋಡಾ, ಮಾನವಾ.
ಇಂದಿನ ಪ್ರಮಥರು ಮುಂದೆ ಬಂದಹರೆಂಬ
ಭ್ರಮೆ ಬೇಡ ನೋಡಾ, ಮಾನವಾ.
ನೀನಂದಿಂಗೆನ್ನದೆ ಕಪಿಲಸಿದ್ಧಮಲ್ಲಿಕಾರ್ಜುನನ ನಂಬು
ನೋಡಾ, ಮಾನವಾ.
Transliteration Anubhavavembudadu anubhāvikagallade
hottageyalla nōḍā mānavā.
Ratnaṅgaḷu samudradallallade
kīḷu kulyādigaḷalli nōḍā, mānavā.
Navamantraṅgaḷa marmavadu gurumukhadallallade,
bariya purāṇagaḷallilla nōḍā, mānavā.
Indina pramatharu munde bandaharemba
bhrame bēḍa nōḍā, mānavā.
Nīnandiṅgennade kapilasid'dhamallikārjunana nambu
nōḍā, mānavā.