•  
  •  
  •  
  •  
Index   ವಚನ - 1711    Search  
 
ಜನ್ಮಕ್ಕೊಮ್ಮೆ ಬಂದು `ಶಿವಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು `ಹರಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಬಸವನ ಪ್ರಸಾದವ ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಚೆನ್ನಬಸವಣ್ಣನ ಪಾದೋದಕ[ವ] ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಪ್ರಭುವಿನ ಪಾದಕ್ಕೆ ವಂದಿಸಿದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಮಡಿವಾಳಣ್ಣನ ಅನುಭವದಲ್ಲಿದ್ದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿದಡೆ ಸಾಲದೇನೋ ಕಲ್ಲಯ್ಯಾ!
Transliteration Janmakkom'me bandu `śivāya vaidyara' endaḍe sālade? Janmakkom'me bandu `harāya' endaḍe sālade? Janmakkom'me bandu basavana prasādava tegedukoṇḍaḍe sālade? Janmakkom'me bandu cennabasavaṇṇana pādōdaka[va] tegedukoṇḍaḍe sālade? Janmakkom'me bandu prabhuvina pādakke vandisidaḍe sālade? Janmakkom'me bandu maḍivāḷaṇṇana anubhavadalliddeḍe sālade? Janmakkom'me bandu kapilasid'dhamallikārjunana pūjisidaḍe sāladēnō kallayya!